Saturday, May 8, 2021

Na nonnanunno -Sanskrit Sloka with meaning

न नोननुन्नो नुन्नोनो ।
नाना नानानना ननु ।।
नुन्नोऽनुन्नो ननुन्नेनो ।
नानेना नुन्ननुन्ननुत् ।।

पदच्छेदः 

न(4) ना(3) ऊननुन्नः(2) नुन्नोनः(5) ना(6) अना(7) नानाननाः(1) ननु(8) । नुन्नः(10) अनुन्नः(11) ननुन्नेनः(9) न (14) अनेनाः (13) नुन्ननुन्ननुत् (12) ।

पदविश्लेषणम्: 

नानाननाः - नानाप्रकाराणि आननानि येषां ते नानाननाः (अनेकमुखयुक्ताः इत्यर्थः)

ऊननुन्नः - ऊनेन निकृष्टेन नुन्नः विद्धः ऊननुन्नः । (नीचेन पराजितः इत्यर्थः)

नुन्नोनः - नुन्नः ऊनः येन सः नुन्नोनः 

अना - न ना अना (अपुरुषः इत्यर्थः)

ननुन्नेनः - नुन्नः पराजितः  इनः स्वामी यस्य सः नुन्नेनः, न विद्यते नुन्नेनः यस्य सः ननुन्नेनः।

नुन्ननुन्ननुत् - अतिशयेन नुन्नः नुन्ननुन्नः । नुन्ननुन्नान् नुदति इति नुन्ननुन्ननुत् ।

अन्वयः (संस्कृतवाक्यरचनापद्धतिः)

हे नानाननाः, ऊननुन्नः ना न । नुन्नोनः ना अना ननु । ननुन्नेन नुन्नः अनुन्नः । नुन्ननुन्ननुत् अनेनाः न ।

अन्वयार्थ:

 हे नानाननाः - हे नाना मुखवालों, 

ऊन - नीच पुरुष से

नुन्नः - हारा हुआ 

ना न - मनुष्य नहीं है । 

नुन्नोनः - नीचपुरुष को पराजित करनेवाला या हरानेवाला 

ना - मनुष्य 

अना - पुरुष नहीं है  

ननु - ना..??

ननुन्नेनः - (न+नुन्न+इन) जिन का स्वामि कभी हारा न हो वह  

नुन्नः अपि - हारा हुआ हो कर भी

अनुन्नः- जीतता है । 

नुन्ननुन्ननुत् - अति पीडित को भी पीडा देने वाला 

न अनेनाः - मनुष्य निर्दोषी नहीं है ।

विवरण:

क्रिस्ताब्द पांचवी सदी के आरंभ के भारतर्ष में संस्कृतभाषा की उच्छ्राय स्थिति की यह श्लोक एक उदाहरण है । इस अवधी में "भारवि" नाम के एक प्रसिद्ध कविवर्य के करकमलों से लिखे गये "किरातार्जुनीयम्" नाम के ग्रंथ का 15 वे सर्ग का 14 वां श्लोक है । केवल "न" व्यंजन का उपयोग कर के सुलभ अनुष्टुप् छंद में इस श्लोक की रचना कविवर्य के करकमलों से हुआ है । यह ग्रंथ ऐसे ही विचित्र अक्षरों से युक्त, तथा विचित्र अर्थवाले श्लोकों से सजा हुआ है । ऐसे विशेषताओं के अतिरिक्त इस ग्रंथ में राजनीति के बारे में ऐसे श्लोक हैं जो पढनेवालों को राजनीतिशास्त्र के बारे में बहुत उपयोगी हैं । भारवी के करकमलों से विरचित इस ग्रंथ को छोडकर कोई अन्य ग्रंथ उपलब्ध नहीं हुआ है । अन्य कवियों की तरह यह कवि भी अपने व अपने काल के बारे में विवरण देनें में संकोच किया है । कहा जाता है कि "भारवेरर्थगौरवम्" इन के इस महान ग्रंथ में शब्दों के अर्थ को ही बहुत प्राधान्य दिया गया है । इस ग्रंथ में राजनीति के साथ साथ श्रृंगार रस से भरे श्लोक हैं, तथा वीररस से भरे किरात - अर्जुन के मध्य हुए युद्धों का भी वर्णन श्लोक हैं । ऐसे महान् संस्कृतकवियों के करकमलों से ही संस्कृतभाषा आज अपने उत्तुंगशिखर पर विराजमान है और आगे भी रहेगा । 

इस एकाक्षरी श्लोक में भगवान श्री कार्तिकेय अपने सैन्य प्रथमगण के सैनिकों से कह रहे हैं कि हे अनेकमुखवाले प्रथमगण के सैनिकों, नीच पुरुष से हारा हुआ पुरुष नीच नहीं होता । नीच पुरुष को हरानेवाला भी नीच नहीं होता । जिसका स्वामी कभी हारा हुआ न हो, वह हार कर भी जीतता है । अत्यंत पीडित मनुष्य को पीडा देनेवाला निर्दोषी नहीं होता । 

तात्पर्य यह है कि अर्जुन के बाणप्रहारों से शिव जी के प्रथमगण के सैनिकों को भय लगा । वे सब रणभूमी छोडकर भागने लगें । तब उन सैनिकों के मुखिया षण्मुख या कार्तिकेय जो शिव जी के पुत्र हैं, उन्हों ने सैनिकों का उत्साह बढाने के लिये यह कहा कि अर्जुन एक नीच या आप लोगों से कम युद्धशास्त्र जाननेवाला एक ऋषि है । एक सामान्य नीच ऋषि के हाथों से आप की हार हो रही है, आप लोग मनुष्य नहीं हो, यदि आप लोग उस अकेले ऋषि को हरायेंगे तो भी आप उन्नती को प्राप्त नहीं कर सकतें । आप लोगों का स्वामी भगवान श्रीशिव हैं जो कभी भी न हारें हैं । आप लोगों की हार से वह भगवान हारे हुए दिखने पर भी युद्ध में वह भगवान ही जीतेंगे । युद्ध से जो पीडा उन को प्राप्त हुआ है उस पीडित शिव जी को युद्धभूमी में अकेला छोडकर भागने पर जो पीडा उन को होता है उस पीडा को प्रदान करनेवाले आप लोग पुण्य नहीं, बल की दोष भरित पाप ही पा लेते हैं ।

इस श्लोक में कार्तिकेय महारथी अर्जुन को एक सामान्य ऋषि ही समझ रहें हैं । नीच या नुन्न पद का अर्थ सामान्य मनुष्य होता है जिस में दूसरे व्यक्ति से भी कम गुण या विशेषता होते हैं । 

इस श्लोक में पदच्छेद करने के बाद प्रति पद के अंत में दिखायी गयी संख्याओं को यदि समान रूप से 1, 2, 3, 4 जैसे जोड दिया जाये तो श्लोक का अन्वयवाक्य बनता है । 

ನ ನೋನನುನ್ನೋ ನುನ್ನೋನೋ |
ನಾನಾ ನಾನಾನನಾ ನನು ||
ನುನ್ನೋ$ನುನ್ನೋ ನನುನ್ನೇನೋ |
ನಾನೇನಾ ನುನ್ನನುನ್ನನುತ್ ||

ಪದಚ್ಛೇದ:

ನ (4) ನಾ (3) ಊನನುನ್ನಃ (2) ನುನ್ನೋನಃ (5) ನಾ (6) ಅನಾ (7) ನಾನಾನನಾಃ (1) ನನು (8) ನುನ್ನಃ (10) ಅನುನ್ನುಃ (11) ನನುನ್ನೇನಃ (9) ನ (14) ಅನೇನಾಃ (13) ನುನ್ನನುನ್ನನುತ್ (12)

ಪದವಿಶ್ಲೇಷಣ:

ನಾನಾನನಾಃ - ನಾನಾಪ್ರಕಾರಾಣಿ ಆನನಾನಿ ಏಷಾಂ ತೇ ನಾನಾನನಾಃ (ಅನೇಕಾ ಆಸ್ಯಾಃ ಏಷಾಂ ತೇ)

ಊನನುನ್ನಃ - ಊನೇನ ನಿಕೃಷ್ಟೇನ ನುನ್ನಃ ವಿದ್ಧಃ ಊನನುನ್ನಃ  

ನುನ್ನೋನಃ - ನುನ್ನಃ ಊನಃ ಯೇನ ಸಃ ನುನ್ನೋನಃ 

ಅನಾ - ನ ನಾ ಅನಾ 

ನನುನ್ನೇನಃ - ನುನ್ನಃ ಇನಃ ಯೇನ ಸಃ ನುನ್ನೇನಃ.  ನ ವಿದ್ಯತೇ ನುನ್ನೇನಃ ಯಸ್ಯ ಸಃ ನನುನ್ನೇನಃ 

ನುನ್ನನುನ್ನನುತ್ - ಅತಿಶಯೇನ ನುನ್ನಾಃ ನುನ್ನನುನ್ನಾಃ, ನುನ್ನನುನ್ನಾನ್ ನುದತಿ ಇತಿ ನುನ್ನನುನ್ನನುತ್.

ಅನ್ವಯಃ (ಸಂಸ್ಕೃತವಾಕ್ಯರಚನಾಪದ್ಧತಿಃ)

ಹೇ ನಾನಾನನಾಃ, ಊನನುನ್ನಃ ನಾ ನ. ನುನ್ನೋನಃ ನಾ ಅನಾ ನನು..??  ನನುನ್ನೇನಃ ನುನ್ನಃ ಅಪಿ ಅನುನ್ನಃ. ನುನ್ನನುನ್ನನುತ್ ಅನೇನಾಃ ನ.

ಅನ್ವಯಾರ್ಥ:

ಹೇ ನಾನಾನನಾಃ - ಹೇ ಅನೇಕಮುಖವುಳ್ಳ ಸೈನಿಕರೇ, 

ಊನ - ನೀಚನಿಂದ

ನುನ್ನಃ - ಸೋತಂತಹ

ನಾ - ಪುರುಷನು 

ನ - ಇಲ್ಲ. 

ನುನ್ನೋನಃ - ನೀಚನನ್ನು ಸೋಲಿಸುವ 

ನಾ - ಮನುಷ್ಯನು

ಅನಾ - ಮನುಷ್ಯನಲ್ಲ 

ನನು - ಅಲ್ಲವೇ..??  

ನನುನ್ನೇನಃ - ಯಾವನ ಸ್ವಾಮಿಯು ಎಂದೂ ಸೋತಿಲ್ಲವೋ ಅವನು

ನುನ್ನಃ ಅಪಿ - ಸೋತಿದ್ದರೂ ಕೂಡ

ಅನುನ್ನಃ - ಗೆಲುವು ಉಳ್ಳವನು.

ನುನ್ನನುನ್ನ - ಅತಿಯಾಗಿ ಪೀಡಿತನಾದವನನ್ನು

ನುತ್ - ಪೀಡಿಸುವವನು

ಅನೇನಾಃ ನ - .ನಿರ್ದೋಷಿಯಲ್ಲ.

ವಿವರಣೆ:

ಕ್ರಿ.ಶ. 5 ನೇ ಶತಮಾನದ ಆದಿಯಲ್ಲಿ ಭರತಖಂಡದ ದಕ್ಷಿಣಭಾಗದಲ್ಲಿ ಜೀವಿಸಿದ್ದರೆನ್ನಲಾದ ಶ್ರೀಭಾರವಿಯು ಒಬ್ಬ ಮಹಾನ್ ಕವಿವರರಾಗಿದ್ದರು. ಬಹುಶಃ ಸಂಸ್ಕೃತದ ಎಲ್ಲ ಕವಿಗಳೂ ತಮ್ಮ ಜೀವನ, ಕಾಲಾದಿಗಳನ್ನು ಮರೆಮಾಚಿ ಕೇವಲ ಜ್ಞಾನಪ್ರಸಾರಕ್ಕೆ ಒತ್ತು ಕೊಟ್ಟಂತೇ ಈ ಕವಿಯೂ ಕೂಡ ಹಾಗೆಯೇ ಮಾಡಿದ್ದಾರೆ. ಆದರೆ ಭಾರತೀಯ ಸಂಸ್ಕೃತಿ, ಸಾಹಿತ್ಯವನ್ನು ಅಧ್ಯಯನಮಾಡಬೇಕೆಂದರೆ ಇಂತಹ ಮಹಾನ್ ಕವಿಗಳ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಲೇಬೇಕು. ಸಂಸ್ಕೃತಸಾಹಿತ್ಯವು ಇಂತಹ ಕವಿವರ್ಯರು ವಿರಚಿಸಿದ ಮಹಾನ್ ಗ್ರಂಥಗಳಿಂದಲೇ ಉಚ್ಛ್ರಾಯ ಸ್ಥಿತಿಯನ್ನು ತಲುಪಿತ್ತು ಹಾಗೂ ಇನ್ನೂ ಅದೇ ಸ್ಥಿತಿಯಲ್ಲಿ ಆಚಂದ್ರಾರ್ಕವಾದ ಕಾಲದವರೆಗೂ ಮುಂದುವರೆಯುತ್ತದೆ. "ಭಾರವೇರರ್ಥಗೌರವಮ್" ಎಂಬ ಶ್ಲೋಕದ ಪಾದದ ಪ್ರಕಾರ ಭಾರವಿ ಕವಿವರ್ಯರು ಪದಗಳ ಅರ್ಥಗೌರವವನ್ನು ಹೆಚ್ಚಿಸಿಬರೆಯುವ ಕವಿಗಳು ಎಂಬ ವಿಷಯವು ಅವರು ರಚಿಸಿದ "ಕಿರಾತಾರ್ಜುನೀಯಮ್" ಎಂಬ ಗ್ರಂಥದಿಂದ ಗೊತ್ತಾಗುತ್ತದೆ. ಈ ಗ್ರಂಥವು ಕೇವಲ ಕಾವ್ಯದೃಷ್ಟಿಯಿಂದಷ್ಟೇ ಅಲ್ಲ, ರಾಜಕೀಯ, ನೈತಿಕ, ಲಾಕ್ಷಣಿಕ, ಮತ್ತು ಶೌರ್ಯಿಕ ದೃಷ್ಟಿಯಿಂದಲೂ ಅತ್ಯುತ್ತಮ ವಾದ ಗ್ರಂಥವಾಗಿದೆ. ಈ ಗ್ರಂಥದಲ್ಲಿ ಅರ್ಜುನನ ತಪೋ ವರ್ಣನೆ, ಹಿಮಾಲಯ ಪರ್ವತದ ವರ್ಣನೆ, ಋತುಗಳ ವರ್ಣನೆ ಮುಂತಾದವುಗಳು ಕಣ್ಣಿಗೆ ಕಟ್ಚಿದಂತೇ ಇರುತ್ತವೆ. 

ಪ್ರಸ್ತುತ ಶ್ಲೋಕವು ಈ ಉದ್ಗ್ರಂಥದ 15 ನೇ ಸರ್ಗದ 14 ನೇ ಶ್ಲೋಕವಾಗಿದೆ. ಅತ್ಯಂತ ಸುಲಭವಾದ ಅನುಷ್ಟುಪ್ ಛಂದಸ್ಸಿನಲ್ಲಿರುವ ಈ ಶ್ಲೋಕದಲ್ಲಿ ಕೇವಲ "ನ" ಎಂಬ ವರ್ಣವನ್ನು ಉಪಯೋಗಿಸಿ ಕವಿವರ್ಯರು ತಮ್ಮ ಕರಕಮಲಗಳಿಂದ ವಿರಚಿಸಿ ಕಾವ್ಯರಸಿಕರಿಗೆ ಅಲೌಕಿಕವಾದ ಆನಂದವನ್ನು ನೀಡಿದ್ದಾರೆ. 

ಅರ್ಜುನನು ಇಂದ್ರಕೀಲ ಪರ್ವತದಲ್ಲಿ ಶ್ರೀರುದ್ರದೇವರನ್ನು ಕುರಿತು ಕಠಿಣ ತಪವನ್ನು ಆಚರಿಸುತ್ತಾನೆ  ಆತನ ತಪವನ್ನು ಹಾಗೂ ಶಕ್ತಿಯನ್ನು ಪರೀಕ್ಷಿಸಲು ರುದ್ರದೇವರು ಮೂಕಾಸುರನೆಂಬ ಅಸುರನನ್ನು ಹಂದಿಯ ರೂಪದಲ್ಲಿ ಕಳುಹಿಸುತ್ತಾನೆ ಹಾಗೂ ತಾನೇ ಸ್ವತಃ ಕಿರಾತನ ವೇಷದಲ್ಲಿ ಅದನ್ನು ಬೆನ್ನಟ್ಟಿಕೊಂಡು ಬರುತ್ತಾನೆ. ತಪೋಭಂಗವಾಗುತ್ತದೆ ಎಂಬ ಚಿಂತೆಯಿಂದ ಅರ್ಜುನನು ಬಾಣ ಹೂಡುತ್ತಾನೆ. ಅದೇ ಸಮಯಕ್ಕೆ ಶಿವನೂ ಬಾಣ ಹೂಡುತ್ತಾನೆ. ಮೂಕಾಸುರನ ವಧೆ ಆದಮೇಲೆ ಬಾಣವನ್ನು ಯಾರು ಮೊದಲು ಪ್ರಯೋಗಿಸಿದರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆಗ ಅರ್ಜುನನಿಗೂ ಹಾಗೂ ಶಿವನು ಹಂದಿಯನ್ನು ತೆಗೆದುಕೊಂಡು ಬರಲು ಕಳಿಸಿದ ದೂತನಿಗೂ ವಾದವಾಗುತ್ತದೆ. ಶಿವನು ತನ್ನ ಪ್ರಮಥ ಗಣಗಳನ್ನು ಕಾರ್ತಿಕೇಯನ ಸಾರಥ್ಯದಲ್ಲಿ ಯುದ್ಧಕ್ಕೆ ಕಳುಹಿಸುತ್ತಾನೆ. ಅರ್ಜುನನ ಬಾಣಗಳ ಪ್ರಹಾರಕ್ಕೆ ತತ್ತರಿಸಿದ ಪ್ರಮಥಗಣಗಳ ಸೈನಿಕರು ದಿಕ್ಕೆಟ್ಟು ರಣಭೂಮಿಯಿಂದ ಓಡಲಾರಂಭಿಸುತ್ತಾರೆ. ಆಗ ಕಾರ್ತಿಕೇಯನು ಈ ಶ್ಲೋಕವನ್ನು ಪ್ರಮಥಗಣಗಳ ಸೈನಿಕರನ್ನು ಕುರಿತು ಹೇಳುತ್ತಾನೆ. ಹೇ ಪ್ರಮಥಗಣಗಳ ಸೈನಿಕರೇ, ನೀಚನಿಂದ ಸೋತಂತಹ ಮನುಷ್ಯನು ಮನುಷ್ಯನಲ್ಲ, ಅದೇ ರೀತಿ ನೀಚನನ್ನು ಸೋಲಿಸುವ ಮನುಷ್ಯನೂ ಸಹ ಮನುಷ್ಯನಲ್ಲ ಅಲ್ಲವೇ..? ಯಾವ ಸೈನಿಕನ ಸ್ವಾಮಿಯು ಸೋಲುವುದೇ ಇಲ್ಲವೋ ಅಂತಹ ಸೈನಿಕನು ಯುದ್ಧದಲ್ಲಿ ಸೋತರೂ ಗೆದ್ದವನೇ ಆಗುತ್ತಾನೆ. ನಿಮ್ಮ ಸೋಲಿನ ಸುದ್ದಿಯಿಂದ ಶಿವನಿಗೆ ಈಗ ದುಃಖವಾಗಿದೆ. ನೀವು ರಣರಂಗದಿಂದ ಓಡಿದ ವಿಷಯ ಅವನಿಗೆ ಇನ್ನೂ ವೇದನೆಯುಂಟುಮಾಡುತ್ತದೆ. ಈ ರೀತಿ ನೋವುಂಟಾದ ವ್ಯಕ್ತಿಗೆ ಮತ್ತೆ ನೋವುಂಟು ಮಾಡುವ ಮನುಷ್ಯನು ನಿರ್ದೋಷಿಯಷ್ಟೇ ಅಲ್ಲ. ಅವನು ಮಹಾಪಾಪಿಯಾಗುತ್ತಾನೆ. ಆದ್ದರಿಂದ ಯುದ್ಧಕ್ಕೆ ಮರಳಿ ಎಂದು ಹೇಳುತ್ತಾನೆ. 

ಈ ಗ್ರಂಥದ ಈ 15 ನೇ ಸರ್ಗದಲ್ಲಿ ಇಂತಹ ಶ್ಲೋಕಗಳು ಹೇರಳವಾಗಿವೆ. "ಯಮಕಾಲಂಕಾರ" ದ ವಿಶೇಷತೆಯನ್ನು ನೋಡಬೇಕಾದರೆ ಹಾಗೂ ಆನಂದಿಸಬೇಕಾದರೆ ಕಾವ್ಯರಸಿಕರು ಓದಲೇಬೇಕಾದ ಗ್ರಂಥಕಾವ್ಯವಿದು. 

ಪದಚ್ಛೇದವಿಭಾಗದಲ್ಲಿರುವ ಪದಗಳ ಮುಂದೆ ನಮೂದಿಸಿದ ಸಂಖ್ಯೆಗಳನ್ನು ಅನುಕ್ರಮವಾಗಿ 1,2,3,4 .. ರೀತಿಯಲ್ಲಿ ಜೋಡಿಸಿದರೆ ಅನ್ವಯವಾಕ್ಯವು ತಯಾರಾಗುತ್ತದೆ.

ಓಂ ನಮೋ ಭಗವತೇ ಹಯಾಸ್ಯಾಯ ||

No comments:

Post a Comment