|| पञ्च अभेदाः ||
(Five similarities)
.
भारतीतीर्थरूपेण भारती समविद्यया |
भक्तानाम् ज्ञानदातारम् भारतीतीर्थमाश्रये ||
.
Today, Chaitra Shudha Shasti marks the 70th Vardhanti of Jagadguru Shankaracharya Sri Sri Bharathi Teertha Mahaswamiji who adores the transcendental throne of Dakshinamnaya Sri Sharada peetam as its 36th Jagadguru in the unbroken lineage of Adi Shankara's Guru parampara. On this auspicious occation of Saptati Mahotsavam let us quote some similarities in life of Sri Shankaracharya and Sri Mahasannidham, which suggests us that our Mahasannidhanam is an aparaavatara (incarnation) of Sri Shankara himself.
1. Avataram (Birth) :
Shankara Bhagavatpada was born to Sri Shivaguru and Aryambika Divya Dampati with the blessings Sri Vrushachaleshwara. Mahasannidhanam was born to Sri Brahmashri Venkatesha Avadhani and Sadvishiromani Sri Ananta Laskhmammanavru with the blessings of Sri Bhavanishankara. Both were born with the blessings of Lord Parameshwara.
2. Vedadhyayanam :
As we quote " अष्टवर्षे चतुर्वेदी द्वादशे सर्वशास्त्रवित् " for Shankaracharya which says, He knew chaturvedas by the age of 8 and was a learned shastravidwan by the age of 12. The same quote holds good for our Sri Mahasannidhanam too. Sri Guru mastered Vedas and Shastras at a tender age and showed an inclination towards adhyatma vichara right from a very young age.
.
3. Sacred confluence of Guru-Shishya :
Sri Shankaracharya met His guru, Sri Govinda Bhagavatpadaru who was a pioneer of Vedanta on the banks of river Narmada (Maharashtra). Similarly, Sri Mahasannidhanam met His guru, Sri Sri Abhinava Vidyateertha Mahaswamiji who was the Yogi among Yogis on the banks of river Kshipra (Ujjaini). Both the events happened on the banks of celebrated rivers and both disciples met their unparalleled gurus with a common quest of attainting spiritual wisdom.
4. Celebrated compositions :
Sri Shankaracharya composed various stothras that lucidly elaborates the vedanta vishaya like Moha mudgara, Soundarya lahari, Shivaanandalahari and many such works. Similar to Adi Shankara, Sri Mahasannidhanam too has composed various stotras like Sri Shankaracharyasthavam, Sri Chandramouleeshwara varnamaala stuthi to mention a few.
5. Vijayayatra (Holy tour) :
Sri Shankaracharya had travelled across the length and breadth of Akhanda bharatha bhoomi to spread and foster Sanatana Dharma. Sri Mahasannidhanam too has taken various Vijayayatras across the country and rejuvenated Sanathana Dharma through intellectual discourses and dharma prachara. His holiness transformed the minds of people and instilled firm conviction in the path of dharma.
Akin to how Adi Shankara invoked the benevolence of Maha Lakshmi through his Kanakadhara strotram and brought down rains of gold onto earth, Mahasannidhanam too ensured the prosperity of Sringeri Sharada Peetham. Sri Mutt shone with opulence and pristine prosperity very much during the reign of Mahasannidhanam.
.
ಇಂದು ಚೈತ್ರ ಶುದ್ಧ ಷಷ್ಠಿ , ಶೃಂಗೇರಿ ಶಾರಾದಪೀಠದ 36ನೇ ಯತಿವರೇಣ್ಯರಾದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ 70ನೇ ವರ್ಷದ ವರ್ಧಂತಿ ಮಹೋತ್ಸವ. ಈ ದಿವ್ಯ ಸಪ್ತತಿಯ ಸುದಿನದಂದು ನಮ್ಮ ಮಹಾಸನ್ನಿಧಾನಂಗಳವರು ಸಾಕ್ಷಾತ್ ಶಂಕರ ಸ್ವರೂಪಿಗಳೇ ಎಂದು ತಿಳಿಸಲ್ಪಡುವ ಅನೇಕ ಸಾಮ್ಯಗಳನನ್ನು ನಾವು ಗಮನಿಸಬಹುದು.
1. ಅವತಾರ :
ಶಿವಗುರು-ಆರ್ಯಾಂಬೆಯರು ವೃಷಾಚಲೇಶ್ವರನಿಗೆ ಮೊರೆಯಿಟ್ಟು ಶಂಕರರನ್ನು ಪುತ್ರರನ್ನಾಗಿ ಪಡೆದಂತೆ , ಪರಮಸಾತ್ವಿಕರಾದ ಬ್ರಹ್ಮಶ್ರೀ ವೆಂಕಟೇಶ ಅವಧಾನಿಗಳು ಮತ್ತು ಸಾಧ್ವಿಶಿರೋಮಣಿ ಶ್ರೀಮತಿ ಅನಂತ ಲಕ್ಷ್ಮಮ್ಮನವರು ಶ್ರೀ ಭವಾನಿಶಂಕರರಿಗೆ ಮೊರೆಯಿಟ್ಟು ನಮ್ಮ ಮಹಾಸನ್ನಿಧಾನಂಗಳವರನ್ನು ಪುತ್ರರಾಗಿ ಪಡೆದರು.
2. ವೇದಾಧ್ಯಯನ :
" ಅಷ್ಟವರ್ಷೇ ಚತುರ್ವೇದಿ ದ್ವಾದಶೇ ಸರ್ವ ಶಾಸ್ತ್ರವಿತ್ " ಎಂಬಂತೆ ಇಬ್ಬರೂ ಸಹ ಗರ್ಭಾಷ್ಟಮದಲ್ಲೇ ವೇದಾಧ್ಯಯನ ಸಂಪನ್ನರೂ, ಸಕಲ ಶಾಸ್ತ್ರಪಾರಂಗತರು ಆದವರು.
3. ಗುರು-ಶಿಷ್ಯ ಸಮಾಗಮ :
ಶಂಕರರಿಗೆ ಆ ಕಾಲದ ಮೇಧಾವಿ ಶ್ರೀ ಗೋವಿಂದ ಭಗವತ್ಪಾದರು ಗುರುಗಳಾಗಿ ನರ್ಮದಾ ನದಿ ತೀರದಲ್ಲಿ ಲಭಿಸಿದರೆ ( ಮಹಾರಾಷ್ಟ್ರ), ಮಹಾಸನ್ನಿಧಾನಂಗಳವರಿಗೆ ನಮ್ಮ ಕಾಲದ ಮಹಾತಪಸ್ವಿ, ಯೋಗವರೇಣ್ಯ ಜಗದ್ಗುರು ಶ್ರೀ ಶ್ರೀಮದಭಿನವ ವಿದ್ಯಾತೀರ್ಥರು ಗುರುಗಳಾಗಿ ಶಿಪ್ರಾ ನದಿ ತೀರದಲ್ಲಿ ಲಭಿಸಿದರು ( ಉಜ್ಜಯಿನಿ).
4. ಸ್ತೋತ್ರ ರಚನೆ :
ಆಚಾರ್ಯ ಶಂಕರರು ಶ್ರವಣಸುಭಗವೆನಿಸಿದ ಮೋಹ ಮುದ್ಗರ, ಸೌಂದರ್ಯಲಹರಿ, ಶಿವಾನಂದಲಹರಿ ಮುಂತಾದ ಅನೇಕ ಸ್ತೋತ್ರಗಳನ್ನು ರಚಿಸಿದಂತೆ, ನಮ್ಮ ಮಹಾಸನ್ನಿಧಾನಂಗಳವರು ಸಹಗೇಯ ಗುಣದಿಂದ ಕೂಡಿದ ಶ್ರೀ ಶಂಕರಾಚಾರ್ಯ ಸ್ತವ, ಶ್ರೀ ಚಂದ್ರಮೌಳೀಶ್ವರ ವರ್ಣಮಾಲಾ ಸ್ತುತಿ ಮುಂತಾದ ಅನೇಕ ಸ್ತೋತ್ರಗಳನ್ನು ರಚಿಸದ್ದಾರೆ.
5. ವಿಜಯಯಾತ್ರೆ :
ಶಂಕರರು ಪವಿತ್ರಭಾರತವನ್ನು ಸಮಗ್ರವಾಗಿ ಸುತ್ತಾಡಿ ಧರ್ಮಪ್ರಚಾರ ಮಾಡಿದಂತೆ, ನಮ್ಮ ಮಹಾಸನ್ನಿಧಾನಂಗಳವರು ಅನೇಕ ವಿಜಯಯಾತ್ರೆಗಳನ್ನು ಕೈಗೊಂಡು ಅನೇಕರ ಮನಸ್ಸನ್ನು ಪರಿವರ್ತಿಸಿ, ಆಸ್ತಿಕ್ಯದತ್ತ ಹರಿಸಿದ್ದಾರೆ.
ಇಷ್ಟೇ ಅಲ್ಲದೇ ಹೇಗೆ ಶಂಕರರು ತಮ್ಮ ಕನಕಧಾರಸ್ತುತಿಯಿಂದ ತಾಯಿ ಮಹಾಲಕ್ಷ್ಮೀಯನ್ನು ಸಾಕ್ಷಾತ್ಕರಿಸಿಕೊಂಡರೋ , ಅಂತೆಯೇ ನಮ್ಮ ಮಹಸನ್ನಿಧಾನಂಗಳವರು ತಮ್ಮ ಪೀಠಾಧಿಪತ್ಯದಲ್ಲಿ ಶ್ರೀಮಠದ ವೈಭವವನ್ನು ಮತ್ತು ಅದರ ಕೀರ್ತಿಪತಾಕೆಯನ್ನು ಎಲ್ಲಾಕಡೆಗಳಲ್ಲೂ ಹರಡುತ್ತಿದ್ದಾರೆ.
.
#Sadguro_pAhi #Sringeri #Vande_Guruparamparam #Mahasannidham #Divyasaptati #Abhinava_Shankara
.
No comments:
Post a Comment