Tuesday, April 21, 2020

lakshanas of jeevan mukta

Courtesy:Sri.V.Subrahmanyam
|| जीवन्मुक्तस्य लक्षणम् ||
.
जीवन्मुक्तिसुखानुभूतिलहरीमामज्यमानान्तरो-
sप्यात्मानं जडबालमूकबधिरोन्मत्तादिवद्दर्शयन् |
योऽयं व्यंजयति क्रमेण भरतादीनां स्थितिं तादृश-
श्रीमद्चन्द्रकिशोरशेखरगुरो: श्रीपादुका मे गतिः ||
.
Sri Bhashya Swamiji ( Vaidyanatha Shastri in his poorvashrama) had a very close conversations with 34th Jagadguru H.H Chandrashekara Bharathi Mahaswamiji in Sringeri with regard to Veda and Vedanta vicharas. He has described the greatness of Mahawamin in various slokas namely " SriSadguru Padukastavarajam " and this is one among them. In this he explains the Jeevanmukta lakshana of Shri Chandrashekara Bhagavan as - " The one who always dwells in the atmasukham and atmaanusandhana and showed Himself as inactive ( Jada ), immature ( baala) , Dumb ( mooka ) and demented (unmatta) to this loukika world. I completely surrender myself to that Sripadukas of Jagadguru Sri Chandrakishorashekara Guru ( Sri Chandrashekara Bharathi Mahaswamiji )who attained the Jeevanmukta state of Bharatha ( Jadabharatha in Bhagavatam).
.
ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳ ಜೊತೆಗೆ ಹೆಚ್ಚಿನ ಒಡನಾಟ ಮತ್ತು ಅವರೊಂದಿಗೆ ವೇದ ವೇದಾಂತದ ವಿಷಯಗಳನ್ನು ಆಲಿಸಿ ಅರಿಯುತ್ತಿದ್ದ , ಶ್ರೀ ಭಾಷ್ಯ ಸ್ವಾಮಿಗಳು ( ಪೂರ್ವಾಶ್ರಮದಲ್ಲಿ ವೈದ್ಯನಾಥ ಶಾಸ್ತ್ರಿಗಳು) ಮಹಾಸ್ವಾಮಿಗಳ ಜೀವನ್ಮುಕ್ತ ಲಕ್ಷಣಗಳನ್ನು ಜಗತ್ತಿಗೆ ತಿಳಿಪಡಿಸಲು " ಶ್ರೀಸದ್ಗುರು ಪಾದುಕಸ್ತವರಾಜಂ " ಎಂಬ ವಿಶೇಷ ಶ್ಲೋಕ ಸರಣಿ ರಚಿಸಿದ್ದಾರೆ. ಅದರಲ್ಲಿನ ಒಂದು ಶ್ಲೋಕ ಈ ಮೇಲಿನದ್ದು. ಇದರಲ್ಲಿ ,
" ಯಾರು ಸದಾ ಆತ್ಮಸುಖವಾದ ಜೀವನ್ಮುಕ್ತ ಸ್ಥಿತಿಯ ಉತ್ತುಂಗದಲ್ಲಿ ವಿರಾಜಮಾನರಾಗಿದ್ದರೋ, ಯಾರು ಈ ಲೌಕಿಕ ಲೋಕಕ್ಕೆ ತಮ್ಮನ್ನು ತಾವೇ ಜಡದಂತೆಯೂ, ಅಪಕ್ವರಂತೆಯೂ, ಮೂಕರಂತೆಯೂ ಮತ್ತು ಬುದ್ಧಿಮಾಂದ್ಯರಂತೆಯೂ ( ಉನ್ಮತ್ತ ) ತೋರಿಸಿಕೊಂಡರೋ, ಯಾರು ಭಾಗವತ ಮಹಾಪುರಾಣದ ಭರತನ ( ಜಡಭರತ ) ಸ್ಥಿತಿಯನ್ನು ಹೊಂದಿದರೋ ಅಂತಹ ಶ್ರೀ ಚಂದ್ರಕಿಶೋರಶೇಖರ ಗುರುಗಳ ( ಚಂದ್ರಶೇಖರ ಭಾರತೀ ಮಹಾಸ್ವಾಮಿಗಳ ) ಶ್ರೀಪಾದುಕೆಗಳೇ ನನಗೆ ಗತಿಯೂ ಮತ್ತು ನಾನು ಸದಾ ಅದನ್ನೇ ಆಶ್ರಯಿಸುತ್ತೇನೆ " ಎಂಬುದಾಗಿದೆ.
#Sadguro_pAhi #Sringeri #Vande_Guruparamparam 
#Mahamahasannidham

No comments:

Post a Comment